ದ ಕೇರಳ ಸ್ಟೋರಿ 2023ರ ಸಾಲಿನಲ್ಲಿ ಬಿಡುಗಡೆಗೊಂಡ ಭಾರತೀಯ ಚಲನಚಿತ್ರ. ಈ ಸಿನಿಮಾವು ಹಿಂದಿ ಭಾಷೆಯಲ್ಲಿದೆ. ಈ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. == ಕಥಾ ವಸ್ತು == ನರ್ಸ್ ಆಗಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿದ್ದ ಶಾಲಿನಿ ಉನ್ನಿಕೃಷ್ಣನ್ ಎಂಬ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಐಸಿಸ್ ಉಗ್ರಗಾಮಿ ಸಂಘಟನೆಯು ಯುವತಿಯರ ಮನಃ ಪರಿವರ್ತನೆ ಮಾಡಿ ವಿದೇಶಕ್ಕೆ ಕರೆದೊಯ್ಯುವ ಕಥಾ ವಸ್ತು ಈ ಸಿನಿಮಾದಲ್ಲಿದೆ. == ನಟನೆ == ಈ ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. == ಬಾಕ್ಸ್ ಆಫೀಸ್ == ಪ್ರಾರಂಭದ ದಿನದಲ್ಲಿ ಚಲನಚಿತ್ರವು ಭಾರತದಲ್ಲಿ ₹8.03 ಕೋಟಿ ಗಳಿಸಿತು. ಇದು 2023 ರಲ್ಲಿ ಭಾರತದಲ್ಲಿ ಐದನೇ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾವಾಗಿದೆ. 15 ಮೇ 2023ಕ್ಕೆ ಚಲನಚಿತ್ರವು ಭಾರತದಲ್ಲಿ ₹175.05 ಕೋಟಿ ಹಾಗೂ ವಿದೇಶದಲ್ಲಿ ₹180.81 ಕೋಟಿ ಗಳಿಸಿದೆ. ಈ ಚಲನಚಿತ್ರವು ಭಾರತದ ಬಹುತೇಕ ಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿತು ಆದರೆ ರಾಜ್ಯ ಮಟ್ಟದ ನಿಷೇಧಗಳು ಮತ್ತು ಅಶಾಂತಿಯ ಕಳವಳದಿಂದಾಗಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರದರ್ಶಿಸಲಾಗಲಿಲ್ಲ. == ಉಲ್ಲೇಖ ==